SatisHFactionKannada Podcast from the US

ಝಣ ಝಣ ಕಾಂಚಾಣ (52)
ಝಣ ಝಣ ಕಾಂಚಾಣ ಅಬ್ಬಾ, ಅದೇನು ದುಡ್ಡಿನ ಮಹಿಮೆ ಅಂತ ಅನ್ನಿಸಿದ್ದು... ನಿನ್ನೆ ಸ್ಟಾರ್ಬಕ್ಸ್ನಲ್ಲಿ ಒಂದು ಕಪ್ ಕಾಫ಼ಿ ತೆಗೆದುಕೊಂಡಾಗ. ಮೊದಲೆಲ್ಲ ಆದ್ರೆ, ಜೇಬಿನಿಂದ ಪರ್ಸು ತೆಗೆದು, ಅದರಲ್ಲಿರೋ ಹಣ ಎಣಿಸಿ ಕೊಡ್ತಿದ್ವಿ. ನಂತರ ಆ ಪ್ರಕ್ರಿಯೆ ಮುಂದುವರೆದು, ಅದೇ ಜೇಬು-ಪರ್ಸುಗಳಿಂದ ಕ್ರೆಡಿಟ್ ಕಾರ್ಡ್ ಕೊಡೊದಕ್ಕೆ ಶುರು ಮಾಡಿದ್ವಿ. ಈಗ ಎಲ್ಲಿ ಹೋದ್ರು ಎಲ್ಲ ಸೈಲೆಂಟಾಗಿ, ಎಲ್ಲವೂ ಫ಼ೋನ್ನಲ್ಲೇ ನಡೆದು ಹೋಗುತ್ತೆ. ಆದ್ರೆ, point of sale ನ ಚಂಗ್ ಚಿಂಗ್ ಸೌಂಡಿಗೆ ಬದಲಾಗಿ ಈಗ ಟಿನ್ ಅನ್ನುವ ಫ಼ೋನ್ ಸದ್ದು ಕೇಳುತ್ತೆ. ನಿಮಗ್ಗೊತ್ತಾ ನಮ್ಮ ಆಫ಼ೀಸಿನಂತೆಯೇ ಎಷ್ಟೋ ಕಡೆ ಎಲ್ಲವೂ ಕ್ಯಾಶ್ಲೆಸ್ ಆಗಿದೆ ಅಂತ? ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಇರುವ ಮುಖ್ಯ ವ್ಯತ್ಯಾಸಗಳಲ್ಲಿ ಅವರು ಖರ್ಚು ಮಾಡುವ ದುಡ್ಡಿನ ಪ್ರಮಾಣವೂ ಸೇರುತ್ತೆ. ನಾನು ಇನ್ಫ಼್ಲೇಷನ್ ಇರೋದ್ರಿಂದ ಹೆಚ್ಚು ಖರ್ಚು ಆಗುತ್ತೆ ಅಂತ ಹೇಳ್ತಾ ಇಲ್ಲ, ಅದರ ಜೊತೆಗೆ ಒಟ್ಟು ಖರ್ಚಿನ ಪ್ರಮಾಣವೇ ಹೆಚ್ಚು.
Audio and video play straight from the show's own hosting. PodSubs stores and serves no media.

