Skip to content
PodSubs
ShowsPeopleGuestsJobsNewsEvents
More
BlogPodCred
Menu
ShowsPeopleGuestsJobsNewsEventsBlogPodCredNetworksSign in
Join nowSign in
  • Shows
  • People
  • Jobs
  • News
  • More
    • Guests
    • Events
    • Blog
    • PodCred
    • Networks
    Join nowSign in

SatisHFactionKannada Podcast from the US

SatisHFactionKannada Podcast from the US artwork

Copy & Paste: ಒಂದು ದಿನದ ಮಟ್ಟಿಗೆ ಇಲ್ಲದಿದ್ರೆ ಹೇಗೆ? (59)

Jun 11, 202511 minAudioSeason 1, Episode 59
ShareXLinkedInFacebookWhatsAppEmail

Copy & Paste functionality ನ ಒಂದು ದಿನದ ಮಟ್ಟಿಗೆ ತೆಗದ್ರೆ ಹೇಗೆ? What happens if the Copy & Paste functionality is removed in the world for just one day! One of my supervisors used to say, "Copy shamelessly!". "Only 2% of the content created in the world is real, everything is else copied & pasted in some way shape or form". ನಾವು ದಿನಾ ಕಾಪಿ-ಪೇಸ್ಟ್ ಪ್ರಕ್ರಿಯೆ ಎಷ್ಟು ಜೋರಾಗಿ ಬೆಳೆದಿದೆ ಅಂದ್ರೆ, ಒಂದು ವಿಂಡೋದಿಂದ ಮತ್ತೊಂದು ವಿಂಡೋಗೆ ರಾಜಾರೋಶವಾಗಿ ಕಾಪಿ ಮಾಡುತ್ತಲೇ ಇರುತ್ತೇವೆ! ಆ ಪ್ರಕ್ರಿಯೆ, ಇತ್ತೀಚೆಗೆ ಚಾಟ್-ಜಿಪಿಟಿ, Gemini, Copiot ಬಂದ ಮೇಲೆ ಇನ್ನೂ ಹೆಚ್ಚಿದೆ ಎನ್ನಬಹುದು. ಕೆಲವು ವರ್ಷಗಳ ಹಿಂದೆ ನನ್ನ ಪರ್ಸನಲ್ ಲ್ಯಾಪ್‌ಟಾಪ್‌ನಲ್ಲಿ ಬ್ಯಾಕ್ ಸ್ಪೇಸ್ ಕೀ ಮಿಸ್ ಆಗಿತ್ತು. ಆಗ ತಾನೆ, ತನ್ನ ತುಂಟಾಟಗಳನ್ನು ಆರಂಭಿಸಿದ್ದ ನನ್ನ ಮಗ, ಒಂದು ದಿನ ಬ್ಯಾಕ್ ಸ್ಪೇಸ್ ಕೀ ಎನ್ನು ತೆಗೆದು ಹಾಕಿದ್ದ. ಅದರಿಂದ ಆದ ತೊಂದರೆ ಅಷ್ಟಿಷ್ಟಲ್ಲ! ಕೊನೆಗೆ, ನಾನು ಕೀ ಬೋರ್ಡ್ ಅನ್ನು ಸಂಪೂರ್ಣ ರಿಪ್ಲೇಸ್ ಮಾಡಿ ಹೊಸ ಕೀ ಬೋರ್ಡ್ ಹಾಕುವವರೆಗೆ ಹೋಗಿತ್ತು, ಆ ತಲೆ ನೋವು. ನಿಮಗೆ ಗೊತ್ತಿರಬಹುದು, ಒಂದಾನೊಂದು ಕಾಲದಲ್ಲಿ Network ಕನೆಕ್ಟ್ ಆಗದ ಕಂಪ್ಯೂಟರುಗಳಲ್ಲಿ ನಾವು ಅದೆಷ್ಟು ಕೆಲಸಗಳನ್ನು ಮಾಡುತ್ತಿದ್ದೆವು. ವರ್ಡ್ ಪ್ರಾಸೆಂಸ್ಸಿಂಗ್ ನಿಂದ ಹಿಡಿದು, ಪ್ರೋಗ್ರಾಮುಗಳನ್ನು ಬರೆದು ಕಂಪೈಲ್ ಮಾಡಿ, ರನ್ ಮಾಡುವವರೆಗೆ. ಆಮೇಲೆ ಅದರಲ್ಲಿ ಗೇಮ್ ಗಳನ್ನು ಆಡುತ್ತಿದ್ದೆವು. ಆಮೇಲೆ, ಅದಕ್ಕೊಂದು ನೆಟ್‌ವರ್ಕ್ ಕನೆಕ್ಷನ್ ಅಂತ ಬಂದ ಮೇಲೆ, ಅದೇ ಕಂಪ್ಯೂಟರುಗಳನ್ನು ಬಳಸಿ, ಡೂಮ್ ಎನ್ನುವ ನೆಟ್‌ವರ್ಕ್ ಗೇಮ್ ಆಡಿದ್ದು, ಇವತ್ತಿಗೂ ನೆನಪಿನಲ್ಲಿ ಅಚ್ಚಳಿಯದೆ ನಿಂತಿದೆ. ನಾವು ನಮ್ಮ ನಮ್ಮ ಕಂಪ್ಯೂಟರುಗಳ ಮೇಲಿನ ಅವಲಂಬನೆಯನ್ನು ಹೆಚ್ಚು ಹೆಚ್ಚು ಮಾಡಿದ್ದರಿಂದಲೇ ಈಗಿನ ಮೊಬೈಲು ಫ಼ೋನುಗಳಿಗೆ ಇಷ್ಟೊಂದು ಡಿಮ್ಯಾಂಡ್ ಬಂದಿದೆಯೇನೋ ಅನ್ನಿಸುತ್ತದೆ. ಈಗಂತೂ ನಿಮ್ಮ ಕೈಯಲ್ಲಿ ಮೊಬೈಲ್ ಇಲ್ಲವೆಂದರೆ, ನೀವು ಒಂದು ರೀತಿಯಲ್ಲಿ disabled ಆದಂತೆಯೇ ಸರಿ. ಈಗ copy & paste ವಿಷಯಕ್ಕೆ ಬರೋಣ: ಆಫ಼ೀಸಿನಲ್ಲಿ ನಾವು ಬಹಳಷ್ಟು ಬಾರಿ, ಹೊಸ ಹೊಸ ಸ್ಲೈಡುಗಳನ್ನು ತಯಾರಿಸುತ್ತೇವೆ. ನಮ್ಮ powerpoint slides ಗಳ ಎಷ್ಟು dependency ಇದೆ ಅಂದರೆ, ನಾವು ಪ್ರತಿದಿನವೂ slides ಬಳಸದೆ ಬದುಕಲಾರೆವು ಎನ್ನುವಷ್ಟರ ಮಟ್ಟಿಗೆ ಬಂದು ಹೋಗಿದ್ದೇವೆ. ಆದರೆ, ಪ್ರತೀ ಬಾರಿಯೂ ಹೊಸ ಹೊಸ ಡಿಸೈನುಗಳನ್ನು ಅಳವಡಿಸಿ ಸ್ಲೈಡುಗಳನ್ನು ಮಾಡುವುದಿದೆ ನೋಡಿ, ಅದರಷ್ಟು ಕಷ್ಟದ ಕೆಲಸ ಇನ್ನೊಂದಿಲ್ಲ. Slides ಮಾಡುವಲ್ಲಿ ಎರಡು ಥರನಾದ ಕುಶಲ ಸ್ಕಿಲ್ಸ್ ಗಳಿವೆ: ಮೊದಲನೆಯದು, ಹೇಳುವ ವಿಷಯವನ್ನು ಸರಿಯಾಗಿ, ಯಾವ ಗೊಂದಲವೂ ಇಲ್ಲದೆ, ಅಂದರೆ ಪೂರ್ತಿ clarity ಇಂದ ಕೇಳುವ audience ಗೆ ನಿರೂಪಿಸುವುದು. ಎರಡನೆಯದು, ಹೇಳುವ ವಿಷಯವನ್ನು ಕಡಿಮೆ ಪದಗಳನ್ನು ಬಳಸಿ, ಚಿತ್ರಗಳನ್ನು ಬಳಸುವುದರ ಮುಖೇನ ಪರಿಣಾಮಕಾರಿಯಾಗಿ (effective) ಆಗಿ ವಿಷದೀಕರಿಸುವುದು. ಮೊದಲನೆಯ ವಿಚಾರಕ್ಕೆ ನಿಮಗೆ ಚುರುಕಾದ ಇಂಜಿನಿಯರ್ ಬುದ್ಧಿ ಬೇಕಾದರೆ, ಎರಡನೆಯದ್ದಕ್ಕೆ ಸ್ವಲ್ಪ ಆರ್ಟಿಸ್ಟ್ ಆಗಿ ಕಲಾತ್ಮಕವಾಗಿ ಯೋಚಿಸುವ ಅಗತ್ಯವೂ ಇದೆ. ನನಗೆ ಮೊದಲನೆಯ ವಿಚಾರದಲ್ಲಿ ಅಷ್ಟೊಂದು ಕಷ್ಟವೆನಿಸದು, ಆದರೆ, ಎರಡನೆಯ ವಿಚಾರದಲ್ಲಿ, ನಾನು ಯಾವಾಗಲೂ ಹೊಸ ಹೊಸ input ಗಳನ್ನು ನಿರೀಕ್ಷಿಸುತ್ತಲೇ ಇರುತ್ತೇನೆ. ಎಲ್ಲೇ ಒಂದು ಸುಂದರವಾದ pattern ಕಂಡು ಬಂದರೆ, ಅಥವಾ ಚಿತ್ರಗಳು ಗೋಚರಿಸಿದರೆ, ಅದನ್ನು ನನ್ನ ಮನಸ್ಸು ನಿರಂತರವಾಗಿ ಕಾಪಿ ಮಾಡುತ್ತಲೆ ಇರುತ್ತದೆ. ಹೀಗೆ, ಯೋಚಿಸುತ್ತಾ ಹೋದಾಗ, ಸುಮ್ಮನೆ ಒಂದು ದಿನದ ಮಟ್ಟಿಗೆ copy & paste feature ಅನ್ನು ಪ್ರತಿಯೊಂದು ಕಂಪ್ಯೂಟರ್ ನಲ್ಲಿ ತೆಗೆದು ಹಾಕಿದರೆಂದರೆ, ಆ ದಿನ ಪ್ರಪಂಚದ ವಹಿವಾಟು, ಸಂಚಲನಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು, ಎಂದು ಯೋಚಿಸುತ್ತಾ ಹೋದಂತೆ, ಮೊದಮೊದಲು science fiction ನ ಒಂದು thrilling experience ಆಗಿ ಶುರುವಾಗಿ, ಕೊನೆಗೆ ಒಂದು horror movie ಯ ಅಂತ್ಯ ಸಮೀಪಿಸುತ್ತಿರುವ ಅನುಭವವಾಗತೊಡಗಿತು. Why do we copy? If we know, if we are unable to "paste" it elsewhere, how will that copy function look like? Is this going to increase our work, or decrease the overall work? For example, you think of copying & pasting the formula on an excel spreadsheet. On the other hand, will this retain the originality of a work, that's relevant? Say, the research article, news story, exploration, expedition, they all look anew, a brand new! What do you think we will be impact to the music industry? How does this impact the artists, movie makers? How do we identify what's original content and what's copied? How much copy is allowed, that's considered legal? Does the work copyright ever work in anyone's favor? (Other than saying, "uncopywritable" is the only word in English that does not have any repeating letters.

Audio and video play straight from the show's own hosting. PodSubs stores and serves no media.

Hosts and Guests

Nobody is credited on this episode yet.

Credit the people on this episode

Be the first to rate this episode

More episodes

All episodes
  1. ಕ್ಯಾಪಿಟಲಿಸಮ್ಮು ಮತ್ತು ಕರ್ಮ ಸಿದ್ಧಾಂತ!

    Nov 13, 20267 minAudio

    ಕ್ಯಾಪಿಟಲಿಸಮ್ಮು ಮತ್ತು ಕರ್ಮ ಸಿದ್ಧಾಂತ! ಎತ್ತಣ ಕ್ಯಾಪಿಟಲಿಸಮ್ಮು ಎತ್ತಣ ಕರ್ಮ ಸಿದ್ಧಾಂತವಯ್ಯ!!

    Credit the people on this episode

  2. ನಮಗೆ ಕನ್ನಡ (ಏಕೆ) ಬೇಕು (edited)

    Sep 10, 202612 minAudio

    ನಮಗೆ ಕನ್ನಡ (ಏಕೆ) ಬೇಕು ಕರ್ನಾಟಕದಿಂದ ಬಹುದೂರ, ದೇಶ-ಭಾಷೆ-ವೇಷವನ್ನು ಬಿಟ್ಟು ಬಂದ ನಮಗೆ ಉತ್ತರ ಅಮೇರಿಕದಲ್ಲಿ ನಡೆಯುವ ಕನ್ನಡ ಕಲರವಗಳು ಬಹಳ ಅಪ್ಯಾಯಮಾನವಾಗಿರುತ್ತವೆ. ನಮಗೆ ಕನ್ನಡ ಬೇಕು, ಅದು ನಮ್ಮ ದೈನಂದಿನ ಅಗತ್ಯಗಳಲ್ಲೊಂದು. ನಾವು ಕನ್ನಡದ ಮೂಲಕ...

    Credit the people on this episode

  3. ನಮಗೆ ಕನ್ನಡ (ಏಕೆ) ಬೇಕು

    Sep 10, 202612 minAudio

    ನಮಗೆ ಕನ್ನಡ (ಏಕೆ) ಬೇಕು ಕರ್ನಾಟಕದಿಂದ ಬಹುದೂರ, ದೇಶ-ಭಾಷೆ-ವೇಷವನ್ನು ಬಿಟ್ಟು ಬಂದ ನಮಗೆ ಉತ್ತರ ಅಮೇರಿಕದಲ್ಲಿ ನಡೆಯುವ ಕನ್ನಡ ಕಲರವಗಳು ಬಹಳ ಅಪ್ಯಾಯಮಾನವಾಗಿರುತ್ತವೆ. ನಮಗೆ ಕನ್ನಡ ಬೇಕು, ಅದು ನಮ್ಮ ದೈನಂದಿನ ಅಗತ್ಯಗಳಲ್ಲೊಂದು. ನಾವು ಕನ್ನಡದ ಮೂಲಕ...

    Credit the people on this episode

  4. ಸ್ವದೇಶ - ವಿದೇಶ

    Apr 22, 202614 minAudio

    ಯಾವಾಗಲೂ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಬಂದು ಅಲ್ಲಿನ ಪೌರತ್ವವನ್ನು ಪಡೆದು ಅಲ್ಲಿಯವರಾಗಿ ಹೋಗೋದು, ಒಂದು ರೀತಿಯ ಕಹಿ-ಸಿಹಿ ಅನುಭವ ಅನ್ನಬಹುದು. ನಾವು ತೊಂಬತ್ತರ ದಶಕದ ಕೊನೆಯಲ್ಲಿ ಬಂದಂತಹ ಟೆಕ್ನಿಕಲ್ ಕೂಸುಗಳು. ಆಗ, ನಾವು ಬಂದ ಹೊಸದರಲ್ಲಿ, ಯಾವುದಾದರೂ ಕನ್ನಡ...

    Credit the people on this episode

  5. ನಾನೇಕೆ ಓದುತ್ತೇನೆ?

    Apr 1, 202612 minAudio

    ಎಲ್ಲರೂ ನಾನೇಕೆ ಬರೆಯುತ್ತೇನೆ ಅನ್ನೋ ಸ್ವವಿಮರ್ಶೆಯಲ್ಲಿ ತೊಡಗಿರುವಾಗ, ನನಗೇಕೆ ಈ ರೀತಿಯ ಆಲೋಚನೆ ಬಂತು ಅಂತ ಯೋಚಿಸಿಕೊಳ್ಳುತ್ತಾ ಹೋದ ಹಾಗೆ, ಅನೇಕ ಗಹನವಾದ ವಿಷಯಗಳು ಹೊರಬಂದವು. ಅದನ್ನು, ನಿಮ್ಮೆಲ್ಲರ ಜೊತೆಯಲ್ಲಿ ಹಂಚಿಕೊಂಡರೆ ಹೇಗೆ ಎನ್ನಿಸಿದ್ದರಿಂದ ಈ ಲೇಖನವನ್ನು...

    Credit the people on this episode